ಹರೀಶ ಮತ್ತು ಗಿರೀಶ ಇಬ್ಬರೂ ಒಳ್ಳೆಯ ಸ್ನೇಹಿತರು. ಒಂದೇ ಶಾಲೆಯಲ್ಲಿ ಓದುತ್ತಿದ್ದ ಇವರು ಒಂದೇ ಜೀವ ಎರಡು ದೇಹ ಎನ್ನುವಷ್ಟು ಆತ್ಮೀಯರು. ಹರೀಶನ ಮನೆಯವರು ತಕ್ಕಮಟ್ಟಿಗೆ ಅನುಕೂಲಸ್ಥರಾದರೆ ಗಿರೀಶನ ಪೋಷಕರು ಬಡವರು.
ಇಬ್ಬರೂ ತಮ್ಮ ಊರಿನ ಹೈಸ್ಕೂಲು ಶಿಕ್ಷಣ ಮುಗಿಸಿ ಕಾಲೇಜಿಗಾಗಿ ಪೇಟೆಗೆ ಬರಬೇಕಾಯಿತು. ಇಬ್ಬರೂ ಒಂದೆ ಕಾಲೇಜು, ಒಂದೇ ಹಾಸ್ಟೆಲ್. ಅಲ್ಲಿಯೂ ಅವರ ಸ್ನೇಹ ಹಾಗೆಯೇ ಮುಂದುವರೆದಿತ್ತು. ಹೀಗಿರುವಾಗ ಬಡವನಾದ ಗಿರೀಶನಿಗೆ ಆಗಾಗ ಹಣದ ಸಮಸ್ಯೆ ಎದುರಾಗಿತ್ತಿತ್ತು. ಹರೀಶನೇ ಆತನಿಗೆ ಹಣದ ಸಹಾಯ ಮಾಡಿ ಧೈರ್ಯ ತುಂಬುತ್ತಿದ್ದ. ನಿನ್ನ ಸಹಾಯದ ಋಣ ಹೇಗೆ ತೀರಸಲಿ ನಾನು ನಿನಗೆ ಸದಾ ಋಣಿ ಎಂಬ ಗಿರೀಶನ ಕೆಲವು ಮಾಮೂಲಿ ಡೈಲಾಗುಗಳಿಗೆ ಹರೀಶನೂ ಕೆಲವು ಸಾಂಪ್ರದಾಯಿಕ ಡೈಲಾಗುಗಳನ್ನೇ ಹೊಡೆಯುತ್ತಿದ್ದ...
ಹೀಗೆ ವಿದ್ಯಾಭ್ಯಾಸ ಸಾಗುತ್ತಿತ್ತು. ಗಿರೀಶ ಚೆನ್ನಾಗಿ ಓದುತ್ತಿದ್ದ. ಹರೀಶನಿಗೆ ಯಾಕೋ ಓದು ತಲೆಗೆ ಹತ್ತಲಿಲ್ಲ.. ಕೆಲವು ಹಣವಂತ ಪೋಕರಿ ಹುಡುಗರ ಸಹವಾಸಕ್ಕೆ ಬಿದ್ದ. ಕುಡಿತ, ಸಿಗರೇಟು ಇತ್ಯಾದಿ ಚಟ ಸಹಜವಾಗಿಯೇ ಕಲಿತ. ಗಿರೀಶನ
ಬುದ್ಧಿಮಾತುಗಳು ಅವನ ತಲೆಗೆ ಹೊಕ್ಕಲಿಲ್ಲ. ಬರುಬರುತ್ತ ಹರೀಶ ಪರಿಪೂರ್ಣ ಕೆಟ್ಟವ ಅನಿಸಿಕೊಂಡ. ಕ್ಲಾಸಿಗೆ ಹೋಗುವುದಂತೂ ಮರೆತೇ ಬಿಟ್ಟಿದ್ದ. ಪಾಪ ಗಿರೀಶ ತನ್ನ ಗೆಳೆಯನ ಸ್ಥಿತಿಗೆ ತುಂಬಾ ನೊಂದುಕೊಂಡ.
ಕಾಲ ಸರಿಯಿತು. ಗಿರೀಶನ ಒಳ್ಳೆಯ ಅಂಕ ಗಳಿಸಿ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾದ. ಈ ನಡುವೆ ಹರೀಶನ ಸುಳಿವೇ ಇರಲಿಲ್ಲ. ಆತ ತುಂಬ ಬದಲಾಗಿದ್ದ. ಅನ್ಯಾಯ, ಅಕ್ರಮ ಧಂಧೆಗಳಲ್ಲಿ ಭಾಗಿಯಾಗಿ ಪೋಲೀಸರ ಅತಿಥಿಯಾಗಿದ್ದ. ಹರೀಶ- ಗಿರೀಶರಿಗೆ ಸಂಪರ್ಕ ಸಂಪೂರ್ಣ ಕಡಿದೇ ಹೋಗಿತ್ತು.
ಇತ್ತ ಗಿರೀಶ ಡ್ಯೂಟಿಗೆ ಜಾಯಿನ್ ಆಗುವ ಉದ್ದೇಶದಿಂದ ಮಂಗಳೂರು ಉತ್ತರ ಪೋಲೀಸ್ ಸ್ಟೇಶನ್ನಿಗೆ ಬಂದಿದ್ದ. ಅಲ್ಲಿ ಅವನಿಗೆ ಶಾಕ್ ಕಾದಿತ್ತು.! ತನ್ನ ಪ್ರಾಣಸ್ನೇಹಿತ ಹರೀಶ ಅದೇ ಸ್ಠೇಶನ್ನಿನ ಕಂಬಿಗಳ ಹಿಂದೆ..!! ಪಾಪ..!! ಪೋಲೀಸ್ ಇನ್ಸ್‌ಪೆಕ್ಟರ್ ತನ್ನ ಸ್ನೇಹಿತ ಗಿರೀಶನೆ ಎಂದರಿತ ಹರೀಶ ಆಶ್ಚರ್ಯಚಕಿತನಾದ. ಅವನಿಗೆ ತನ್ನ ಅಪರಾಧಗಳ ಬಗ್ಗೆ ಅತೀವ ನೊಂದುಕೊಂಡ. ಪಾಪಪ್ರಜ್ಞೆಯಿಂದ ತನ್ನ ಗೆಳೆಯನ ಮುಖ ನೋಡಲಾಗದೆ ತಲೆತಗ್ಗಿಸಿದ. ತನ್ನ ತಪ್ಪಿಗೆಲ್ಲ ಕ್ಷಮೆ ಕೇಳಿ ಹೊಸ ಬದುಕು ಆರಂಭಿಸಬೇಕೆಂದುಕೊಂಡ. ಗಿರೀಶ ತನ್ನನ್ನು ಬಂಧಮುಕ್ತಗೊಳಿಸುವುದಾಗಿ ಕನಸು ಕಂಡ. ಗಿರೀಶನೂ ಮನಸ್ಸಲ್ಲಿ ಏನೇನೋ ಯೋಚಿಸುತ್ತಾ ಗೆಳೆಯನ ಬಳಿ ಬಂದ.. ಇಬ್ಬರೂ ಮುಖ-ಮುಖ ನೋಡಿದರು. ಹರೀಶನ ಬಾಯಿಯಿಂದ ಮಾತೇ ಹೊರಡಲಿಲ್ಲ. ಪ್ರಾಯಶ್ಚಿತದ ಕಣ್ಣೀರ ಹನಿ ಜಾರುತ್ತಿತ್ತು. ಹಾಗೆ ನಿಮಿಷಗಳ ಕಾಲ ಮುಖ ನೋಡುತ್ತಾ ನಿಂತ ಗೆಳೆಯರನ್ನು ಎಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು. ಗಿರೀಶನಿಗೋ ಮಾತೇ ತೋಚಲಿಲ್ಲ. ಹೇಗಾಯಿತು, ಏನಾಯಿತು ಕೇಳಲು.ಏನೂ ಉಳಿದಿಲ್ಲ. ಗಿರೀಶನ ಬಾಯಿಯಿಂದ ಬರುವ ಮಾತಿಗಾಗಿ ಹರೀಶ ಕಾಯುತ್ತಿದ್ದ. ಕೊನೆಗೂ ಮೌನ ಮುರಿದ ಗಿರೀಶ.. ತನ್ನ ಗೆಳೆಯನ ಮುಖ ನೋಡಿ ಕಷ್ಟಪಟ್ಟು ಮುಗುಳ್ನಗು ತಂದುಕೊಳ್ಳಲೆತ್ನಿಸುತ್ತಾ ಮಾತುಗಳು ಹೊರಹಾಕಿಬಿಟ್ಟ......
.
.
.
.
.
.
.
.
.
.
.
.
.
.
ಏಯ್.. ಈ ದಾನೆ ಮೂಲು....????!!!!

Comments
Post a Comment